ಮೊಹಮ್ಮದ್ ಕೈಫ್ () (ಜನನ 1 ಡಿಸೆಂಬರ್ 1980) ಒಬ್ಬ ಭಾರತೀಯ ಕ್ರಿಕೆಟಿಗ . ಅವರು 2000 ರ ಅಂಡರ್ -19 ತ೦ಡದ ನಾಯಕನಾಗಿ ವಿಶ್ವ ಕಪ್ನಲ್ಲಿ ಗೆಲುವು ಸಾಧಿಸಿದ ನ೦ತರ ರಾಷ್ಟೀಯ ತಂಡಕ್ಕೆ ಆಯ್ಕೆಯಾದರು. ಅವರ ಅತ್ಯುತ್ತಮ ಅಥ್ಲೆಟಿಕ್ ಮತ್ತು ಎಸೆಯುವ ಕೌಶಲ್ಯದೊಂದಿಗೆ ಅವರು ಭಾರತದ ಅತ್ಯುತ್ತಮ ಕ್ಷೇತ್ರರಕ್ಷಕರಾಗಿದ್ದರು. ೨೦೦೨ರ ಇಂಗ್ಲೆಂಡ್ ವಿರುದ್ದದ ನ್ಯಾಟ್ವೆಸ್ಟ್ ಸರಣಿಯ ಫೈನಲ್ ನಲ್ಲಿ ಭಾರತ ೩೨೬ ರನ್ ಗುರಿಯನ್ನು ಚೇಸ್ ಮಾಡುವಾಗ, ಕೈಫ್ 87 * (75 ಎಸೆತಗಳಲ್ಲಿ) ರನ್ ಗಳಿಸಿ ಪ೦ದ್ಯವನ್ನು ಗೆಲ್ಲಿಸಿಕೊಟ್ಟರು. == ವೈಯಕ್ತಿಕ ಜೀವನ == ಕೈಫ್ ಅವರು ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ಡಿಸೆಂಬರ್ 1, 1980 ರಂದು ಜನಿಸಿದರು. ಅವರ ತಂದೆ ಮೊಹಮ್ಮದ್ ತಾರಿಫ್ ರೈಲ್ವೇಸ್ ಕ್ರಿಕೆಟ್ ತಂಡ ಮತ್ತು ಉತ್ತರ ಪ್ರದೇಶ ಕ್ರಿಕೆಟ್ ತಂಡದ ಪರವಾಗಿ ಆಡಿದ್ದರು. ಅವರ ಸಹೋದರ ಮೊಹಮ್ಮದ್ ಸೈಫ್ ಮಧ್ಯಪ್ರದೇಶ ಕ್ರಿಕೆಟ್ ತಂಡ ಮತ್ತು ಉತ್ತರ ಪ್ರದೇಶ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ 25 ಮಾರ್ಚ್ 2011 ರಂದು ಕೈಫ್, ನೊಯ್ಡಾ ಮೂಲದ ಪತ್ರಕರ್ತೆ ಪೂಜಾ ಯಾದವ್ ಅವರನ್ನು ಮದುವೆಯಾದರು . === ರಾಜಕೀಯ ವೃತ್ತಿಜೀವನ === ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿ೦ದ 2014 ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಫುಲ್ಪುರದಿಂದ ಸ್ಪರ್ಧಿಸಿ ಭಾರತೀಯ ಜನತಾ ಪಾರ್ಟಿಯ ಕೇಶವ ಪ್ರಸಾದ್ ಮೌರ್ಯ ಎದುರು ಸೋಲನುಭವಿಸಿದರು. . == ==